ಈಕೆ ಹೆಸರು ಊರ್ಮಿಳಾ
ಅಲಿಯಾಸ್ ಬಿಂದು.. ಭಜರಂಗಿ, ಪೊಲೀಸ್ ಕ್ವಾಟ್ರಸ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿದ್ರು.

ಈ ಬಿಂದು, ಮೋಹನ್
ಎಂಬಾತನ ಜೊತೆ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದಳು. ಮೋಹನ್ ಈಗಾಗಲೇ ಮದ್ವೆ ಆಗಿದ್ದು ಪತ್ನಿಯನ್ನು ಬಿಟ್ಟು ಬಿಂದು ಜೊತೆ ಸಂಸಾರ ಮಾಡ್ತಿದ್ದ. ಆದ್ರೆ ಇದೇ ಬಿಂದು ಈಗ ಮೋಹನ್ ಪಾಲಿನ ಮೃ*ತ್ಯುವಾಗಿದ್ದಾಳೆ. ಹೆಂಡ್ತಿ ಬಿಟ್ಟು ಪ್ರಿಯತಮೆ ಹಿಂದೆ ಹೋಗಿದ್ದ ಮೋಹನ್ ಬರ್ಬರವಾಗಿ ಕೊಲೆಯಾಗಿದ್ದಾನೆ.

ಫೆಬ್ರವರಿ 28 ರಂದು
ಬೆಂಗಳೂರಿನ ಬಗಲಗುಂಟೆ ವ್ಯಾಪ್ತಿಯ ಮಂಜುನಾಥ ನಗರದ ಬಾಡಿಗೆ ಮನೆಯಲ್ಲಿ 40 ವರ್ಷದ ಮೋಹನ್ ರಾವ್ ಶವ, ನಗ್ನ ಸ್ಥಿತಿಯಲ್ಲಿ ಬಿದ್ದಿತ್ತು. ಕೈ-ಕಾಲುಗಳನ್ನು ಕಟ್ಟಿ, ಬಾಯಿಗೆ ಟೇಪ್ ಅಂಟಿಸಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಪೊಲೀಸರಿಗೆ ತನಿಖೆ ಮೊದಲು ಶಂಕೆ ಮೂಡಿದ್ದು ಮೋಹನ್ ಜೊತೆಗಿದ್ದ ಪ್ರೇಯಸಿ ಊರ್ಮಿಳಾ ಅಲಿಯಾಸ್ ಬಿಂದು ಮೇಲೆ.. ಮೋಹನ್ ಜೊತೆಗಿದ್ದರೂ ಬಿಂದುಗೆ ಶ್ರೀನಿವಾಸ ರಾಘವ್ ಎಂಬ ಯುವಕನ ಜೊತೆ ಅಕ್ರಮ ಸಂಬಂಧವಿತ್ತು. ಫೆಬ್ರವರಿ 18ರಂದು ರಾತ್ರಿ ಮನೆಯಲ್ಲಿ ಭರ್ಜರಿ ಪಾರ್ಟಿ ನಡೆದಿತ್ತು. ಮೋಹನ್, ಬಿಂದು, ಶ್ರೀನಿವಾಸ್ ಮತ್ತು ಧನುಷ್ ನಾಲ್ವರೂ ಕುಡಿದು ಮಜಾ ಮಾಡಿದ್ದರು.

ಪಾರ್ಟಿ ಮಧ್ಯೆ ಮೋಹನ್ ವಯಾಗ್ರ ಮಾತ್ರೆ ಸೇವಿಸಿದ್ದ.
ಕುಡಿದ ಮತ್ತಿನಲ್ಲಿ ಬಿಂದು ಮೇಲೆ ಮುಗಿಬಿದ್ದಿದ್ದ. ಇದನ್ನ ನೋಡಿದ ವಿನಯ್ ಸಿಟ್ಟು ನೆತ್ತಿಗೇರಿದೆ. ಕೋಪದಿಂದ ಚಾಕುವಿನಿಂದ ಮನಬಂದಂತೆ ಚುಚ್ಚಿದ್ದಾನೆ. ಮೋಹನ್ ಜೋರಾಗಿ ಕಿರುಚಾಡಲು ಶುರು ಮಾಡಿದ್ದಾನೆ. ಈ ವೇಳೆ ಭಯದಿಂದ ಧನುಷ್, ಶ್ರೀನಿವಾಸ್ ಹಾಗೂ ಬಿಂದು ಸೇರಿ ಮೋಹನ್ ಬಾಯಿ ಮತ್ತು ಮೂಗಿಗೆ ಟೇಪ್ ಸುತ್ತಿದ್ದಾರೆ. ಮೋಹನ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ಕೊಲೆ ಬಳಿಕ ಹೆದರಿದ ಬಿಂದು & ಗ್ಯಾಂಗ್‌, ಶವವನ್ನು ಅಲ್ಲೇ ಬಿಟ್ಟು ಎಸ್ಕೇಪ್ ಆಗಿದೆ.

ಬಳಿಕ ಮಾಡಿದ ಪಾಪ,
ಮನಶಾಂತಿಗಾಗಿ ಧರ್ಮಸ್ಥಳ ಸುಬ್ರಮಣ್ಯ ಸುತ್ತಾಡುತ್ತಾ ಕಂಡ ಕಂಡ ದೇವರಿಗೆ ಕೈ ಮುಗಿತಿದ್ರು. ಮೊಬೈಲ್ ಜಾಡು ಹಿಡಿದ ಪೊಲೀಸರು ದೇವರಿಗೆ ಕೈ ಮುಗಿತಿದ್ದಾಗಲೇ ಕೈಗೆ ಕೊಳ ಹಾಕಿದ್ರು. ಮಾಡಿದ ಪಾಪ ಪಾಪಿಗಳನ್ನು ಬಿಡುತ್ತಾ.. ಆ ದೇವರು ಕೂಡಾ ಹೇಗೆ ಕಾಪಾಡ್ತಾನೆ ಹೇಳಿ.. ಇಲ್ಲು ಆಗಿದ್ದು ಅದೇ..

By Pavan

Leave a Reply

Your email address will not be published. Required fields are marked *