ಆಲೂರು ತಾಲೂಕಿನ ಜನತೆಯ ಬಹು ದಶಕಗಳ ಬೇಡಿಕೆಯಾಗಿದ್ದ “ವಿದ್ಯುತ್ ವಿತರಣಾ ಉಪಕೇಂದ್ರ” ನಿರ್ಮಾಣ ಕಾಮಗಾರಿಗೆ ಇಂದು ಭೂಮಿ ಪೂಜೆ ನೆರವೇರಿಸಿದ ಶಾಸಕ ಮಂಜು.
ಪ್ರಸ್ತುತ ಇಡೀ ತಾಲ್ಲೂಕಿನಲ್ಲಿ ಕೇವಲ ಒಂದು ವಿತರಣಾ ಉಪಕೇಂದ್ರವಿದ್ದು ರೈತರು ವಿದ್ಯುತ್ ಸಮಸ್ಯೆ ಅನುಭವಿಸುತ್ತಿದ್ದರು. ಶಾಸಕರ
ಸತತ ಪರಿಶ್ರಮದ ಫಲವಾಗಿ 17ಕೋಟಿ 52ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ವಿದ್ಯುತ್ ವಿತರಣಾ ಉಪಕೇಂದ್ರ ಮಂಜೂರಾಗಿದ್ದು, ರೈತರು ಮತ್ತು ತಾಲೂಕಿನ ಜನತೆಗೆ ಬಹಳ ಅನುಕೂಲವಾಗಲಿದೆ.
ಇದೇ ಸಂದರ್ಭದಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಅಹವಾಲು ಸ್ವೀಕಾರಿಸಿದರು
ಈ ಸಂದರ್ಭದಲ್ಲಿ ಅಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಜೊತೆಗಿದ್ದರು.

By Pavan

Leave a Reply

Your email address will not be published. Required fields are marked *