ಕರ್ನಾಟಕ ಬಜೆಟ್ 2026: ಬಜೆಟ್ ಗ್ರಾತ ಕಳೆದ ಬಾರಿಗಿಂತ 40 ಸಾವಿರ ಕೋಟಿ ರೂ. ಹೆಚ್ಚಳ

ಆದಾಯದ ಮೂಲ ಅಂದಾಜು ಮೊತ್ತ (ಕೋಟಿ ರೂ.ಗಳಲ್ಲಿ) ವಾಣಿಜ್ಯ ತೆರಿಗೆ 1,25,000 ಕೋಟಿ ರಾಜ್ಯ ಅಬಕಾರಿ 45,000 ಕೋ ನೋಂದಣಿ ಮತ್ತು ಮುದ್ರಾಂಕ 29,000 ಕೋಟಿ ಮೋಟಾರು ವಾಹನ ತೆರಿಗೆ 15,500 ಕೋಟಿ ಇತರೆ ಮೂಲಗಳು ₹5,500 ಕೋಟಿ

ಸಾಲ ಪ್ರಮಾಣ ಹೆಚ್ಚಳ ಇನ್ನು ಈ ಬಾರಿಯ ಕರ್ನಾಟಕ ಬಜೆಟ್‌ನಲ್ಲಿ ಸಾಲದ ಪ್ರಮಾಣವು ಸಹ ಹೆಚ್ಚಳವಾಗಿದೆ. ಒಟ್ಟು ಬಜೆಟ್ ಗಾತ್ರ 4,48,004 ಕೋಟಿ ರೂ. (13.3% ಹೆಚ್ಚಳ). ರಾಜ್ಯ ಸರ್ಕಾರವು ಸುಮಾರು 1.26 ಲಕ್ಷ ಕೋಟಿ ರೂ. ಸಾಲ ಪಡೆಯಲಿದೆ.

ಒಟ್ಟು ಸಾಲಗಳು 1,32,000 ಕೋಟಿ ರೂ.ಗಳು ಮತ್ತು ಸಾಲೇತರ ಬಂಡವಾಳ ರಶೀದಿಗಳು 190 ಕೋಟಿ ರೂ.ಗಳು ಸೇರಿದಂತೆ, 2026-27ರ ಒಟ್ಟು ರಶೀದಿಗಳು 4,47,240 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ವರ್ಷದ ಒಟ್ಟು ವೆಚ್ಚವನ್ನು 4,48,004 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ, ಇದರಲ್ಲಿ ಇವು ಸೇರಿವೆ ಕಂದಾಯ ವೆಚ್ಚ: 3,38,007 ಕೋಟಿ ರೂ. ಬಂಡವಾಳ ವೆಚ್ಚ: 74,682 ಕೋಟಿ ರೂ.

ಕರ್ನಾಟಕ ಬಜೆಟ್ 2026 ಮುಖ್ಯಾಂಶಗಳು:
ಆಡಳಿತ ಮತ್ತು ಉದ್ಯೋಗ :

  • ಕರ್ನಾಟಕದ ಸಮಗ್ರ ಅಭಿವೃದ್ಧಿಗೆ 11G ಮಾದರಿ ಆರ್ಥಿಕತೆ ಘೋಷಣೆ
  • ಪ್ರಸಕ್ತ ವರ್ಷದಲ್ಲಿ 56,432 ಉದ್ಯೋಗ ನೇಮಕಾತಿ

ಕ್ಷಣ :

  • ರಾಜ್ಯದಾದ್ಯಂತ 800 ಕರ್ನಾಟಕ ಪಬ್ಲಿಕ್ ಸ್ಕೂಲ್ ಮತ್ತು ಸರ್ಕಾರಿ ಶಾಲೆಗಳು ಆರಂಭ
  • ಎಲ್ಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ಪುನರಾರಂಭ
  • ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಭಾಗ್ಯ

ಮಹಿಳಾ ಮತ್ತು ಸಾಮಾಜಿಕ ಭದ್ರತೆ :

  • ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಎಲ್ಲಾ ಜಿಲ್ಲೆಗಳಲ್ಲಿ ‘ಅಕ್ಕ ಪಡೆ’ ಆರಂಭ
  • ಬಾಣಂತಿಯರಿಗೆ ಬಿಸಿಯೂಟ ಯೋಜನೆ
  • ಮಧುಮೇಹದಿಂದ ಬಳಲುತ್ತಿರುವ ಮಕ್ಕಳಿಗೆ ಉಚಿತ ಇನ್ಸುಲಿನ್

ಅನ್ನಭಾಗ್ಯ ಯೋಜನೆ :

  • 5 ಕೆಜಿ ಅಕ್ಕಿ ಜೊತೆಗೆ ‘ಇಂದಿರಾ ಕಿಟ್’ ವಿತರಣೆ
  • ಇಂದಿರಾ ಕಿಟ್‌ನಲ್ಲಿ ತೊಗರಿಬೇಳೆ, ಅಡುಗೆ ಎಣ್ಣೆ, ಸಕ್ಕರೆ, ಹೆಸರುಕಾಳು ಮತ್ತು ಉಪ್ಪು

ಕೃಷಿ ಮತ್ತು ರೈತರಿಗಾಗಿ :

  • 38 ಲಕ್ಷ ರೈತರಿಗೆ ಸಾಲ ನೀಡಲು ರೂ.30,000 ಕೋಟಿ ಮೀಸಲು
  • ರೂ. 100 ಕೋಟಿ ವೆಚ್ಚದಲ್ಲಿ ಕೃಷಿ ವಿಸ್ತಾರ ಯೋಜನೆ
  • ಕೋಲಾರದಲ್ಲಿ ಹೈಟೆಕ್ ಹಾರ್ವೆಸ್ಟರ್ ಹಬ್ ಮತ್ತು ರೈತ ಮಾಲ್

ಬೆಂಗಳೂರು ಅಭಿವೃದ್ಧಿ:

  • ಬೆಂಗಳೂರಿನ ಅಭಿವೃದ್ಧಿಗೆ ರೂ.7,000 ಕೋಟಿ ಮೀಸಲು
  • ನಗರದಲ್ಲಿ 40 ಕಿ.ಮೀ ಸುರಂಗ ಮಾರ್ಗ ನಿರ್ಮಾಣ ಯೋಜನೆ
  • ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಲು ಹಲವು ಯೋಜನೆಗಳು
  • ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಯೋಜನೆ

ಇತರೆ ಪ್ರಮುಖ ಘೋಷಣೆಗಳು:

  • ಮೈಸೂರನ್ನು ಎರಡನೇ ಐಟಿ ರಾಜಧಾನಿಯಾಗಿ ಅಭಿವೃದ್ಧಿ
  • ಕಲ್ಯಾಣ ಕರ್ನಾಟಕದಲ್ಲಿ ರೂ.1,000 ಕೋಟಿ ವೆಚ್ಚದಲ್ಲಿ 1,124 ಕಿ.ಮೀ ‘ಕಲ್ಯಾಣ ಪಥ’
  • ರಾಜ್ಯಾದ್ಯಂತ 1,250 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಪಾಯಿಂಟ್‌ಗಳು
  • ಬೆಂಗಳೂರು ಮತ್ತು ಬೀದರ್‌ನಲ್ಲಿ ಶ್ವಾನ ಸಂತಾನ ನಿಯಂತ್ರಣ ತರಬೇತಿ ಕೇಂದ್ರ
  • ಪಶುಗಳ ರೋಗ ಪತ್ತೆಗಾಗಿ ಸಿಟಿ ಸ್ಕ್ಯಾನಿಂಗ್ ಕೇಂದ್ರ ಸ್ಥಾಪನೆ

Leave a Reply

Your email address will not be published. Required fields are marked *